ದುರ್ಗದ ಕೋಟೆಯಲ್ಲಿ ಸೆಕೆಂಡ್‌ಹ್ಯಾಂಡ್ ಲವರ್ ನ ಡ್ಯುಯಟ್
Posted date: 19 Wed, Feb 2014 – 01:21:53 PM

ಸತ್ಯ ಇನ್ ಲವ್, ಗಿಲ್ಲಿ, ಲಕ್ಷ್ಮಿ ಚಿತ್ರಗಳ ನಿರ್ದೇಶಕ ರಾಘವ ಲೋಕಿ ಈಗ ಸೆಕೆಂಡ್ ಹ್ಯಾಂಡ್ ಲವರ್ ಹುಡುಕಾಟದಲ್ಲಿ ನಿರಂತರವಾಗಿದ್ದಾರೆ.  ಅವರ ಹುಡುಕಾಡದಲ್ಲಿ ತಾಜ್‌ಮಹಲ್‌ನ ಅಮರ ಪ್ರೇಮಿ ಅಜಯ್‌ರಾವ್ ಜೊತೆಗೂಡಿದ್ದಾರೆ.  ಬಳುಕುವ ಬಳ್ಳಯಂತ ಬೆಡಗಿನ ಪ್ರಣೀತಾ ಕೂಡಾ ಇವರಿಗೆ ಸಪೋರ್ಟ್ ಆಗಿದ್ದಾರೆ.  ಕಳೆದ ವಾರದಲ್ಲಿ ಇವರೆಲ್ಲ ಮದಕರಿ ನಾಯಕನ ಕೋಟೆಯ ನಾಡಾದ ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದರು

ದುರ್ಗದ ಕಲ್ಲಿನ ಕೋಟೆಯ ನಡುವೆ ಅಜಯ ಹಾಗೂ ಪ್ರಣೀತಾ ಡ್ಯುಯೆಟ್ ಹಾಡುವಲ್ಲಿ ತಲ್ಲೀನರಾಗಿದ್ದರು.  ಭಜರಂಗಿ ನಿರ್ದೇಶಕ ಹರ್ಷ ಈ ಪ್ರೇಮಿಗಳಿಗೆ ಸ್ಟೆಪ್ಸ್ ಹಾಕಿಸುವಲ್ಲಿ ನಿರತರಾಗಿದ್ದರು.

ವಿರಾಮದ ವೇಳೆ ಮಾತಿಗೆ ಕುಳಿದ ನಿರ್ದೇಶಕರ ರಾಘವಲೋಕಿ ಲವ್ ಮಾಡಿದ ಹುಡುಗಿಗೋಸ್ಕರ ಸಾಧನೆ ಮಾಡಲು ಹೊರಟ ರಾಕ್‌ಸ್ಟಾರ್‌ವೊಬ್ಬನ ಕಥೆಯಿದು.  ಆತನ ಸಾಧನೆಯ ಈ ಹಾದಿಯಲ್ಲಿ ಇಬ್ಬರು ಹುಡುಗಿಯರು ಸಿಗುತ್ತಾರೆ.  ಮೊದಲನೆಯವಳು ಕೈತಪ್ಪಿ ಎರಡನೆಯವಳು ಸಿಕ್ಕಾಗ ನಡೆಯುವ ಘಟನೆಗಳೇ ಈ ಚಿತ್ರದ ಹೈಲೆಟ್ ಅಜಯ ಪ್ರಣೀತಾ ಹಾಗೂ ಅನಿಷಾ ಪ್ರಮುಖ ಪಾತ್ರಗಳಿದ್ದು ವಿಶ್ವ ಹಾಗೂ ಗಿರಿ ಕಾಮಿಡಿ ಸೀನ್‌ಗಳಲ್ಲಿ ಅಭಿನಯಿಸಿದ್ದಾರ. ಜಿ.ಎಂ.ಐ.ಟಿ. ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ೨ ದಿನ, ಅಲ್ಲದೆ ಚಿತ್ರದುರ್ಗದ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿಸಿದ್ದೇವೆ ಎಂದು ಕಥೆ ಹಾಗೂ ಲೊಕೇಷನ್‌ಗಳ ಬಗ್ಗೆ ಹೇಳಿದರು

ನಾಯರಿ ಅಜಯ್ ಮಾತನಾಡಿ ನಾನು ಕೂಡ ಉತ್ತರ ಕರ್ನಾಟಕದವನೇ  ಆಗಿರುವುದರಿಂದ ಈ ಪಾತ್ರದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ.  ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಬಂದಿದ್ದೇನೆ. ದುರ್ಗ ಎಂದ ಕೂಡಲೇ ನಮಗೆ ವಿಷ್ಣು ಅಭಿನಯದ ನಾಗರಹಾವು ಚಿತ್ರ ನೆನಪಿಗೆ ಬರುತ್ತದೆ. ೬ ಇಲ್ಲಿನ ಅಭಿಮಾನಿಗಳ ಪ್ರೀತಿ ಕಂಡು ಹೃದಯ ತುಂಬಿ ಬಂದಿದೆ. ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ಎಕ್ಸ್‌ಕ್ಯೂಸ್‌ಮಿ ನಂತರ ಅದೇ ಥರದ ಪಾತ್ರ ಮಾಡುತ್ತಿದ್ದೇನೆ.  ನಾನು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗಿ ಸಾಧನೆ ಮಾಡುತ್ತೇನೆ.  ಈ ಸಾಧನೆಯ ಹಾದಿಯಲ್ಲಿ ನನಗೆ ಇಬ್ಬರು ಹುಡುಗಿಯರು ಬರುತ್ತಾರೆ. ಕಥೆ ತುಂಬಾ ಇಂಟರಸ್ಟಿಂಗ್ ಆಗಿದೆ. ನಿರ್ದೇಶಕ ರಾಘವಲೋಕ ಹಾಗೂ ನಾಯಕಿ ಪ್ರಣೀತಾ ಅವರ ಜೊತೆ ಅಥವಾ ಮೊದಲ ಬಾರಿಗೆ ಅಭಿನಯಿಸುತ್ತಿದ್ದೇನೆ ಎಂದು ತನ್ನ ಅನುಭವಗಳನ್ನು ಹಂಚಿಕೊಂಡರು.

ನಾಯಕಿ ಪ್ರಣೀತಾ ಮಾತನಾಡಿ ನಾನು ಕೂಡ ಈ ಸ್ಥಳಕ್ಕೆ ಫಸ್ಟ್ ಟೈಮ ಬಂದಿದ್ದೇನೆ.  ಅಭಿಮಾನಿಗಳ ಉತ್ಸಾಹ ಕಂಡು ತುಂಬಾ ಸಂತೋಷವಾಗುತ್ತಿದೆ.  ಇಂಥಾ ಬಿಸಿಲಿನಲ್ಲೂ ಅವರು ಶೂಟಿಂಗ್ ನೋಡಲು ಕಾದುಕುಳಿತಿದ್ದಾರೆ.  ನೃತ್ಯ ನಿರ್ದೇಶಕರ ಹರ್ಷ ಅವರ ಜೊತೆ ಕೂಡ ಮೊದಲ ಬಾರಿಗೆ ವರ್ಕ್ ಮಾಡುತ್ತಿದ್ದೇನೆ.  ಈವರೆಗೆ ನಾನು ಆಕ್ಷನ್ ಸಿನಿಮಾಗಳನ್ನೇ ಮಾಡುತ್ತಿದ್ದ.  ಲವ್ ಸ್ಟೋರಿಯೊಂದರಲ್ಲಿ ಮೊದಲ ಅನುಭವ  ಎಂದು ಅನುಭವಗಳನ್ನು ಹಂಚಿಕೊಂಡರು.

ನೃತ್ಯ ನಿರ್ದೇಶಕ ಹರ್ಷ ಮಾತನಾಡುತ್ತ ಲೋಕಿ ಅವರ ಎಲ್ಲಾ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಅಜಯ್ ಹಾಗೂ ನನ್ನ ಕಾಂಬಿನೇಷನ್‌ನ ತಾಜಮಹಲ್ ಚಿತ್ರದ ಹಾಡನ್ನು ಜನ ಈಗಲೂ ಇಷ್ಟಪಡುತ್ತಾರೆ.  ನಾವು ಕೋಟೆಗಳನ್ನು ಹುಡುಕಿಕೊಂಡು ಫಾರಿನ್, ಆಗ್ರಾ ಅಂತೆಲ್ಲ ಸುತ್ತಾಡುತ್ತೇವೆ.  ನಮ್ಮ ಪಕ್ಕದಲ್ಲೇ ಇಷ್ಟೊಂದು ಸುಂದರ ಕೋಟೆ ಪ್ರದೇಶ ಇದೆಯೆಂದು ನನಗೆ ಗೊತ್ತೇ ಇರಲಿಲ್ಲ.  ಮುಂದೆ ನನ್ನ ಚಿತ್ರಗಳಿಗೆ ಇಲ್ಲಿಗೆ ಬರುತ್ತೇನೆ ಎಂದು ಖುಷಿಯಿಂದ ಹೇಳಿದರು.  ಸಂಗೀತ ನಿರ್ದೇಶಕರ ಗುರುಕಿರಣ್, ನಿರ್ಮಾಪಕ ಮಂಜುನಾಥ ಬಂದಿರಲಿಲ್ಲ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed